ಕ್ಯೂ ಆರ್ ಕೋಡ್ ರಚನೆ ಹಾಗೂ ಕೆಲಸ
ನೀವು ಬಹುಶಃ ತುಂಬಾ ಕಡೆ ಕ್ಯೂ ಆರ್ ಕೋಡ್ ನೋಡಿರಬಹುದು. ಎಲ್ಲ ನೋಡೋದಕ್ಕೆ ಒಂದೇ ತರಹ ಅನ್ನಿಸಬಹುದು. ಆದರೆ ಸೂಕ್ಷ್ಮ ರೀತಿಯಲ್ಲಿ ಗಮನಿಸಿದರೆ ಎಲ್ಲವೂ ಒಂದು ಮಾದರಿಯನ್ನು ಅನುಸರಿಸುತ್ತಿರುವದು ಅರಿವಾಗುತ್ತದೆ.
ವಾಸ್ತವಿಕವಾಗಿ ಕ್ಯೂ ಆರ್ ಕೋಡ್ ಒಂದು ನಿಗದಿತ ವಿನ್ಯಾಸವನ್ನು ಹೊಂದಿದ್ದು ಅದರ ನಿಯಮದ ಅನುಸಾರವೇ ರಚಿಸಿ ಮುದ್ರಿಸಲಾಗಿರುತ್ತದೆ. ಅದೇ ಕಾರಣದಿಂದ ಕ್ಯೂ ಆರ್ ಕೋಡ್ ಸ್ಕ್ಯಾನರ್ ಗಳು ಅದರ ಫೋಟೋ ತೆಗೆದು ವಿಶ್ಲೇಷಣೆ ಮಾಡಿ ಮಾಹಿತಿಯನ್ನು ಹೊರ ತೆಗೆಯುವದು.
ಬನ್ನಿ ವಿವರವಾಗಿ ಕ್ಯೂ ಆರ್ ಕೋಡ್ ವಿನ್ಯಾಸದ ಬಗ್ಗೆ ತಿಳಿಯೋಣ.
ವಿನ್ಯಾಸ
ಕ್ಯೂ ಆರ್ ಕೋಡ್ ಮುಖ್ಯವಾಗಿ ಬಿಳಿ ಚೌಕ ಗ್ರಿಡ್ ಮೇಲೆ ಜೋಡಿಸಿರುವ ಕಪ್ಪು ಚೌಕಗಳನ್ನು ಹೊಂದಿರುತ್ತದೆ.
ಸಾಮಾನ್ಯವಾಗಿ ಮೂರು ಮೂಲೆಗಳಲ್ಲಿ ದೊಡ್ಡ ಚೌಕಗಳು ಸಹ ಇರುತ್ತದೆ. ಈ ಮೂರು ಚೌಕಗಳು ಕ್ಯೂ ಆರ್ ಕೋಡ್ ನ ಮೇಲ್ಭಾಗ ಯಾವುದು ಪತ್ತೆ ಮಾಡುವದಕ್ಕೆ ಕ್ಯೂ ಆರ್ ಕೋಡ್ ಗೆ ಸಹಾಯಕ.
ಕ್ಯೂ ಆರ್ ಕೋಡ್ ನ ಗಾತ್ರ, ಬಣ್ಣ, ಸಂಕೇತಿಕರಣ ವನ್ನು ಬಳಕೆದಾರರು ತಮಗೆ ಅಗತ್ಯ ಇರುವ ಹಾಗೆ ಬದಲಾಯಿಸುವ ಅವಕಾಶ ಇದ್ದೇ ಇದೆ.
ಆದರೆ ಕ್ಯೂ ಆರ್ ಕೋಡ್ ಓದುವ ಹಾಗಿರಬೇಕು ತುಂಬಾ ಚಿಕ್ಕದು, ಮಸುಕು / ಮಬ್ಬು / ಅಸ್ಪಷ್ಟವಾಗಿ ಪ್ರಿಂಟ್ ಮಾಡುವ ಹಾಗಿಲ್ಲ.
ಮಾಹಿತಿಯ ಸಂಕೇತಿಕರಣ
- ಸಂಖ್ಯೆ
- ಅಕ್ಷರ ಮತ್ತು ಸಂಖ್ಯೆ
- ಬೈಟ್
- ಕಂಜಿ
ತಪ್ಪು ಸರಿ ಮಾಡುವದು
ಕ್ಯೂ ಆರ್ ಕೋಡ್ ತಪ್ಪನ್ನು ಸರಿ ಮಾಡುವ ತಂತ್ರಗಳನ್ನು ಹೊಂದಿರುತ್ತದೆ. ಇದರಿಂದ ಅಕಸ್ಮಾತ್ ಅರ್ಧ ಮರ್ಧ ಹಾಳಾಗಿದ್ದರೂ ಅದನ್ನು ಸ್ಕ್ಯಾನರ್ ಗಳು ಓದಲು ಸಾಧ್ಯ.
ಸ್ಕ್ಯಾನಿಂಗ್
ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನರ್ ಬಳಸಿ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡ ಬಹುದು.
ಈ ಯಂತ್ರಗಳು ತಮ್ಮ ಕ್ಯಾಮೆರಾ ಬಳಸಿ ಕ್ಯೂ ಆರ್ ಕೋಡ್ ನ ಫೋಟೋ ತೆಗೆದು ಆಮೇಲೆ ಸಾಫ್ಟವೇರ್ ಬಳಸಿ ಕೋಡ್ ನಲ್ಲಿ ಉಳಿಸಿರುವ ಮಾಹಿತಿಯನ್ನು ಡಿಕೋಡ್ ಮಾಡುತ್ತವೆ.
ಕ್ಯೂ ಆರ್ ಕೋಡ್ ರಚನೆ
ಕ್ಯೂ ಆರ್ ಕೋಡ್ ಅನ್ನು ಮಾಹಿತಿಯನ್ನು ಸಮರ್ಥವಾಗಿ ಸಂಕೇತಿಕರಣ ಮಾಡಿ ಉಳಿಸುವಂತೆ ಹಾಗೆಯೇ ನಿಖರವಾಗಿ ಸ್ಕ್ಯಾನಿಂಗ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ.
ಕ್ಯೂ ಆರ್ ಕೋಡ್ ನ ಭಾಗಗಳನ್ನು ಅರಿತು ಕೊಂಡರೆ ಅದು ಹೇಗೆ ಕೆಲ್ಸ ಮಾಡುತ್ತೆ, ಯಾಕೆ ಅದು ಉಪಯುಕ್ತ ಸಲಕರಣೆ ಎಂಬುದನ್ನು ಅರಿತು ಕೊಳ್ಳಬಹುದು.
ಬನ್ನಿ ಕ್ಯೂ ಆರ್ ಕೋಡ್ ಅಲ್ಲಿ ಯಾವ ಯಾವ ಭಾಗಗಳಿವೆ ತಿಳಿಯೋಣ. ಕ್ಯೂ ಆರ್ ಕೋಡ್ ಅಲ್ಲಿ ಈ ಮುಂದಿನ ಭಾಗಗಳಿವೆ.
- ಖಾಲಿ ಜಾಗ / ಶಾಂತ ಜಾಗ
- ಹುಡುಕುವ ಮಾದರಿ (ನಿಲುವು ಮಾದರಿ)
- ಹೊಂದಾಣಿಕೆ ಮಾದರಿ
- ಸಮಯ ಮಾದರಿ
- ಆವೃತ್ತಿ ಮಾಹಿತಿ
- ವಿನ್ಯಾಸ ಮಾಹಿತಿ
- ಮಾಹಿತಿ ಸಂಕೇತಿಕರಣ
ಪ್ರತಿಯೊಂದರ ವಿವರ ಒಂದೊಂದಾಗಿ ತಿಳಿಯೋಣ.
ಶಾಂತ ಜಾಗ / ಖಾಲಿ ಜಾಗ
ಕ್ಯೂ ಆರ್ ಕೋಡ್ ನ ಸುತ್ತ ಇರುವ ಖಾಲಿ ಜಾಗವನ್ನು ಶಾಂತ ಜಾಗ ಎನ್ನಬಹುದು.
ಉದ್ದೇಶ
ಇದು ಸುತ್ತ ಮುತ್ತ ಇರುವ ಬೇರೆ ದೃಶ್ಯ ಚಿತ್ರಗಳಿಂದ ದೂರ ಇರುವ ಹಾಗೆ ಹಾಗೂ ಸ್ಕ್ಯಾನ್ ಮಾಡುವಾಗ ಅವು ಹಸ್ತಕ್ಷೇಪ ಮಾಡದಂತೆ ತಡೆಯುತ್ತದೆ.
ಗುರುತು
ಇದನ್ನು ಗುರುತಿಸುವದು ಸುಲಭ. ಕ್ಯೂ ಆರ್ ಕೋಡ್ ಸುತ್ತಲೂ ಇರುವ ಬಿಳಿಯ ಬಣ್ಣದ ಖಾಲಿ ಜಾಗವೇ ಶಾಂತ ಜಾಗ. ಈ ಶಾಂತ ಜಾಗ ಸಾಮಾನ್ಯವಾಗಿ ಕಡಿಮೆ ಎಂದರೂ ನಾಲ್ಕು ಚೌಕದ ಅಗಲದಷ್ಟು ಇರುತ್ತದೆ.
ಕೆಲಸ
ಕ್ಯೂ ಆರ್ ಕೋಡ್ ಓದುವ ಸಾಧನ ಈ ಶಾಂತ ಜಾಗವನ್ನು ಕ್ಯೂ ಆರ್ ಕೋಡ್ ಅನ್ನು ಸುತ್ತಲಿನ ಗ್ರಾಫಿಕ್ಸ್ ನಿಂದ ಬೇರ್ಪಡಿಸಲು ಬಳಸುತ್ತವೆ. ಇದು ನಿಖರವಾಗಿ ಪತ್ತೆ ಮಾಡಲು ಹಾಗೂ ಯಾವುದೇ ಸಮಸ್ಯೆ ಇಲ್ಲದೇ ಸಂಕೇತವನ್ನು ಡಿಕೋಡ್ ಮಾಡಲು ಸಹಾಯಕ.
ಹುಡುಕುವ ಮಾದರಿ (ನಿಲುವು ಮಾದರಿ)
ಕ್ಯೂ ಆರ್ ಕೋಡ್ ನೋಡಿದ ತಕ್ಷಣ ಗಮನಕ್ಕೆ ಬರುವದು ಮೂರು ಮೂಲೆಯಲ್ಲಿ ದೊಡ್ಡ ಚೌಕಗಳು. ಅದನ್ನು ನೋಡಿದ ಕೂಡಲೆ ಕ್ಯೂ ಆರ್ ಕೋಡ್ ಮೇಲ್ಭಾಗ ಯಾವುದು ಎಂದು ತಿಳಿಯುತ್ತದೆ. ಅಲ್ವಾ? ಅದನ್ನು ನಿಲುವು ಮಾದರಿ ಅರ್ಥಾತ್ ಪೊಸಿಶನಲ್ ಮಾದರಿ ಎನ್ನುತ್ತಾರೆ.
ಉದ್ದೇಶ
ಕ್ಯೂ ಆರ್ ಕೋಡ್ ಓದುವ ಸಾಧನ / ಸ್ಮಾರ್ಟ್ ಫೋನ್ ಇತ್ಯಾದಿಗಳಿಗೆ ಒಂದು ಚಿತ್ರದಲ್ಲಿ ಕ್ಯೂ ಆರ್ ಕೋಡ್ ಎಲ್ಲಿದೆ, ಅದರ ಮೇಲ್ಭಾಗ ಯಾವುದು ಎಂಬುದನ್ನು ಪತ್ತೆ ಹಚ್ಚಲು ಈ ಹುಡುಕುವ ಮಾದರಿ ಸಹಾಯಕ.
ಗುರುತು
ಕ್ಯೂ ಆರ್ ಕೋಡ್ ನ ಮೂರು ಮೂಲೆಗಳಲ್ಲಿ ಇರುವ ಚೌಕದ ಮಾದರಿ ಮೂಲಕ ಇದನ್ನು ಗುರುತಿಸಬಹುದು.
ಪ್ರತಿ ಮೂಲೆಯಲ್ಲಿ ಮೂರು ಚಿಕ್ಕ ಚೌಕದಷ್ಟು ಅಗಲ ಹಾಗೂ ಎತ್ತರ ಇರುವ ಕಪ್ಪು ಚೌಕಕ್ಕೆ ಮೊದಲು ಬಿಳಿ ಹಾಗೂ ನಂತರ ಕಪ್ಪು ಬಣ್ಣದ ಬಾರ್ಡರ್ ಇರುತ್ತದೆ.
ಕೆಲಸ
ಕ್ಯೂ ಆರ್ ಕೋಡ್ ಓದುವ ಸಾಧನಗಳು ಈ ಮಾದರಿಯನ್ನು ಬಳಸಿ ಕ್ಯೂ ಆರ್ ಕೋಡ್ ಇರುವ ಜಾಗ, ಅದರ ಗಾತ್ರ ಹಾಗೂ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಬಳಸುತ್ತವೆ. ಇದರಿಂದ ನಿಖರವಾಗಿ ಕ್ಯೂ ಆರ್ ಕೋಡ್ ನ ಸಂಕೇತ ಬಿಡಿಸಲು (ಡಿಕೋಡ್ ಮಾಡಲು) ಸಹಾಯ ಆಗುತ್ತೆ.
ಹೊಂದಾಣಿಕೆ ಮಾದರಿ
ಕ್ಯೂ ಆರ್ ಕೋಡ್ ನ ಕೆಳಗೆ ಬಲ ಭಾಗದಲ್ಲಿ ಒಂದು ಚಿಕ್ಕ ಚೌಕ ಅದರ ಸುತ್ತಲೂ ಬಿಳಿ ಬಣ್ಣದ ಅಂಚು ಇರುತ್ತದೆ. ಅದಕ್ಕೆ ಹೊಂದಾಣಿಕೆ ಮಾದರಿ ಎನ್ನುತ್ತಾರೆ.
ಉದ್ದೇಶ
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವಾಗ ಕ್ಯಾಮೆರಾ ಲೆನ್ಸ್ ಕಾರಣದಿಂದ ಆಗುವ ವಿರೂಪಗಳು, ಹೊಂದಾಣಿಕೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಈ ಹೊಂದಾಣಿಕೆ ನಮುನೆಗಳು ಸಹಾಯಕ.
ಗುರುತು
ಕ್ಯೂ ಆರ್ ಕೋಡ್ ನಲ್ಲಿ ಈ ಹೊಂದಾಣಿಕೆ ನಮುನೆಗಳನ್ನು ಕೆಲವು ಕಡೆ ಇಟ್ಟಿರು ತ್ತಾರೆ. ಈ ಚಿಕ್ಕ ಕಪ್ಪು ಚೌಕದ ಸುತ್ತ ಬಿಳಿ ಚೌಕಗಳು ನಂತರ ಮತ್ತೆ ಕಪ್ಪು ಚೌಕಗಳ ಅಂಚು ಇರುತ್ತದೆ.
ಕೆಲಸ
ಕ್ಯೂ ಆರ್ ಕೋಡ್ ರೀಡರ್ ಗಳು ಈ ಮಾದರಿಗಳನ್ನು ದೃಷ್ಟಿ ಕೋನದ ವಿರೂಪವನ್ನು ಹೊಂದಿಸಿ ಮತ್ತು ನಿಖರವಾಗಿ ಸಂಕೇತಗಳನ್ನು ಬಿಡಿಸಲು ಬಳಸುತ್ತವೆ.
ಉದಾಹರಣೆಗೆ ಬಳಕೆದಾರ ಸ್ಮಾರ್ಟ್ ಫೋನ್ ಅನ್ನು ಓರೆಯಾಗಿ ಹಿಡಿದಾಗ ಅಥವಾ ದೊಡ್ಡ ಗಾತ್ರದ ಕ್ಯೂ ಆರ್ ಕೋಡ್ ನಲ್ಲಿ ಇದು ಉಪಯುಕ್ತ.
ಸಮಯ ಮಾದರಿ
ಹುಡುಕುವ ಮಾದರಿಗಳ ನಡುವೆ ಕಪ್ಪು ಮತ್ತು ಬಿಳಿ ಚೌಕಗಳು ಒಂದಾದರ ಮೇಲೆ ಇನ್ನೊಂದು ಇದ್ದು ಅವುಗಳ ಸಾಲು ಈ ಮಾದರಿಗಳನ್ನು ಜೋಡಿಸುತ್ತವೆ.
ಉದ್ದೇಶ
ಸಮಯದ ನಮುನೆಗಳು ಚಿಕ್ಕ ಚಿಕ್ಕ ಬಿಳಿ ಹಾಗೂ ಕಪ್ಪು ಚೌಕಗಳ ಗಾತ್ರ ಹಾಗೂ ನಡುವಿನ ಜಾಗ ಅಳೆಯಲು ಒಂದು ಮಾನದಂಡದ ರೂಪದಲ್ಲಿ ಸಹಾಯಕ.
ಗುರುತು
ಕ್ಯೂ ಆರ್ ಕೋಡ್ ನ ಹುಡುಕು ಮಾದರಿಗಳ ನಡುವೆ ಹರಿವ ಒಂದಾದರ ಮೇಲೊಂದು ಕಪ್ಪು ಹಾಗೂ ಬಿಳಿ ಚೌಕಗಳನ್ನು ಸಮಯದ ನಮುನೆ ಎನ್ನುತ್ತಾರೆ.
ಕೆಲಸ
ಕ್ಯೂ ಆರ್ ಕೋಡ್ ರೀಡರ್ ಗಳು ಸಮಯ ನಮುನೆಗಳನ್ನು ಚಿಕ್ಕ ಚಿಕ್ಕ ಚೌಕಗಳ ಜೋಡಣೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಸಂಕೇತಗಳನ್ನು ನಿಖರವಾಗಿ ಬಿಡಿಸಲು ಬಳಸುತ್ತವೆ.
ವಿನ್ಯಾಸ ಮತ್ತು ಆವೃತ್ತಿಯ ಮಾಹಿತಿ
ಹುಡುಕು ಮಾದರಿಯ ಒಳ ಅಂಚುಗಳ ಬಳಿ ಕ್ಯೂ ಆರ್ ಕೋಡ್ ನ ಫಾರ್ಮಾಟ್ (ವಿನ್ಯಾಸ) ಹಾಗೂ ವರ್ಶನ್(ಆವೃತ್ತಿ) ಯ ಮಾಹಿತಿ ಇರುತ್ತದೆ.
ಉದ್ದೇಶ
ಫಾರ್ಮಾಟ್ (ವಿನ್ಯಾಸ) ಹಾಗೂ ವರ್ಶನ್(ಆವೃತ್ತಿ) ಕ್ಯೂ ಆರ್ ಕೋಡ್ ನ ಬಗ್ಗೆ ಹಲವು ವಿಚಾರಗಳನ್ನು ತಿಳಿಸುತ್ತದೆ. ಮಾಹಿತಿ ಸಂಕೇತಿಕರಣದ ಬಗೆ ಹಾಗೂ ತಪ್ಪು ಸರಿಪಡಿಸುವಿಕೆಯ ಬಗ್ಗೆ ತಿಳಿಸುತ್ತದೆ.
ಗುರುತು
ಸಾಮಾನ್ಯವಾಗಿ ಹುಡುಕು ಮಾದರಿಯ ಪಕ್ಕದಲ್ಲಿ ಫಾರ್ಮಾಟ್ (ವಿನ್ಯಾಸ) ಹಾಗೂ ವರ್ಶನ್(ಆವೃತ್ತಿ) ಮಾಹಿತಿಯನ್ನು ನೋಡಬಹುದು.
ಕೆಲಸ
ಕ್ಯೂ ಆರ್ ಕೋಡ್ ರೀಡರ್ ಗಳು ಇದನ್ನು ಸಂಕೇತ ಬಿಡಿಸುವ ಆಯ್ಕೆಗಳನ್ನು ಹಾಗೂ ಬೇರೆ ಬೇರೆ ಕ್ಯೂ ಆರ್ ಕೋಡ್ ಸ್ಟಾಂಡರ್ಡ್ ಮತ್ತು ವಿಶಿಷ್ಟತೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಬಳಸುತ್ತವೆ.
ಮಾಹಿತಿ ಸಂಕೇತಿಕರಣ
ಈ ಮೇಲಿನ ಮಾದರಿಗಳನ್ನು ಬಿಟ್ಟು ಉಳಿದ ಜಾಗ ಮಾಹಿತಿ ಹಾಗೂ ತಪ್ಪು ಸರಿ ಮಾಡುವ ಚೌಕಗಳಿಗೆ ಬಳಸುತ್ತಾರೆ. ಈ ಮೇಲಿನ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಅದನ್ನು ಗುರುತಿಸಲಾಗಿದೆ.
ಉದ್ದೇಶ
ಮಾಹಿತಿ ಸಂಕೇತಿಕರಣ ಜಾಗದಲ್ಲಿ ಕ್ಯೂ ಆರ್ ಕೋಡ್ ಅಲ್ಲಿ ಉಳಿಸ ಬೇಕಾದ ಮಾಹಿತಿಯನ್ನು ಇಟ್ಟಿರಲಾಗುತ್ತದೆ. ಅದು ಬರಹ, ಸಂಖ್ಯೆ, ಬೈನರಿ ಡಾಟಾ, ವಿಳಾಸ, ವೆಬ್ ತಾಣದ ವಿಳಾಸ(ಯುಆರ್ ಎಲ್), ಈಮೇಲ್ ವಿಳಾಸ ಹೀಗೆ ಏನೇ ಆಗಿರಬಹುದು.
ಗುರುತು
ಸಾಮಾನ್ಯವಾಗಿ ಕಪ್ಪು, ಬಿಳಿ ಚೌಅಕಗಳನ್ನು ಯಾವುದಾದರೂ ಸಂಕೇತಿಕರಣ ನಿಯಮ ಹಾಗೂ ಅಲ್ಗಾರಿತಮ್ ಗೆ ಅನುಗುಣವಾಗಿ ಜೋಡಿಸಲಾಗಿರುತ್ತದೆ.
ಕೆಲಸ
ಕೊನೆಯ ಮಾತು
ಒಟ್ಟಿನಲ್ಲಿ ಕ್ಯೂಆರ್ ಕೋಡ್‌ನ ರಚನೆಯು ಹುಡುಕುವ ಮಾದರಿ, ಹೊಂದಾಣಿಕೆ ಮಾದರಿ , ಸಮಯದ ನಮುನೆ , ಫಾರ್ಮ್ಯಾಟ್ ಮತ್ತು ಆವೃತ್ತಿಯ ಮಾಹಿತಿ, ಡೇಟಾ ಎನ್‌ಕೋಡಿಂಗ್ ಮತ್ತು ಶಾಂತ ಜಾಗಗಳು ಹೀಗೆ ವಿವಿಧ ಭಾಗಗಳನ್ನು ಒಳಗೊಂಡಿದೆ.
ಕ್ಯೂ ಆರ್ ಕೋಡ್‌ನಲ್ಲಿ ನಿಖರವಾದ ಸ್ಕ್ಯಾನಿಂಗ್, ನಂಬಿಕೆಗೆ ಅರ್ಹ ಡಿಕೋಡಿಂಗ್ ಮತ್ತು ಡೇಟಾದ ಸಮರ್ಥ ಸಂಗ್ರಹಣೆಯನ್ನು ಸರಳ ಮಾಡುವದರಲ್ಲಿ ಪ್ರತಿಯೊಂದು ಭಾಗವು ಕೂಡಾ ಮುಖ್ಯ.
ಕ್ಯೂ ಆರ್ ಕೋಡ್‌ನ ರಚನೆಯನ್ನು ಅರ್ಥಮಾಡಿಕೊಳ್ಳುವ ಮೂಲಕ, ಬಳಕೆದಾರರು ಮತ್ತು ಡೆವಲಪರ್‌ಗಳು ಅದರ ವಿನ್ಯಾಸ, ಎನ್‌ಕೋಡಿಂಗ್ ಪ್ಯಾರಾಮೀಟರ್‌ಗಳು ಮತ್ತು ವಿವಿಧ ಅಪ್ಲಿಕೇಶನ್‌ಗಳು ಮತ್ತು ಬಳಕೆಯ ಸಂದರ್ಭಗಳಿಗಾಗಿ ಬದಲಾಯಿಸಿ ಬಳಸಬಹುದಾಗಿದೆ.