ವ್ಯಾಪಾರಿ ಮನ ಪರಿಚಯ

ನಮಸ್ತೆ ವ್ಯಾಪಾರಿ ಮನಕ್ಕೆ ಹಾರ್ದಿಕ ಸ್ವಾಗತ.

ವ್ಯಾಪಾರ ಅನ್ನುವದು ಒಂದು ಕಲೆ. 

ಇದು ವಂಶಪಾರಂಪರ್ಯ ವಾಗಿ ಬರುತ್ತೆ ಎನ್ನಲಾಗುತ್ತದೆ ಆದರೂ ವಾಸ್ತವ ವಾಗಿ ಸಮಯ ಪ್ರಜ್ಞೆ, ಕಲಿಯುವ ಮನಸ್ಸು, ಸಾಮಾನ್ಯ ಜ್ಞಾನ, ತಾಳ್ಮೆ, ಪ್ರಾಮಾಣಿಕತೆ ಇರುವ ಯಾರೇ ಆಗಲಿ ವ್ಯಾಪಾರದಲ್ಲಿ ಜಯಿಸಬಹುದು.

ವ್ಯಾಪಾರದಲ್ಲಿ ಲಾಭ ಗಳಿಸಲು ಯಾವುದೇ ಡಿಗ್ರೀ ಬೇಕಿಲ್ಲ, ತಿಳುವಳಿಕೆ, ಜಾಣತನ ಮತ್ತು ಶ್ರಮ ವಹಿಸಿ ಕೆಲಸ ಮಾಡುವ ಮನಸ್ಸು ಬೇಕು ಅಷ್ಟೇ!!

ವ್ಯಾಪಾರಿ ಮನ ಬ್ಲಾಗ್ ನ ಮುಖ್ಯ ಉದ್ದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜ್ಞಾನ ಕನ್ನಡದಲ್ಲಿ ಅತಿ ಸರಳ ರೂಪದಲ್ಲಿ ನೀಡುವದು.

ವ್ಯಾಪಾರಿ ಮನ ಅಂತಹ ತಿಳುವಳಿಕೆಯ ತುಣುಕನ್ನು ಪುಟ ಪುಟಗಳಲ್ಲಿ ತುಂಬಿ ಕನ್ನಡದಲ್ಲಿ ನಿಮಗೆ ಹಂಚಲಿದೆ.


ನೀವೊಬ್ಬ ಎಂಬಿಎ ವಿದ್ಯಾರ್ಥಿ ಆಗಿರಲಿ ಅಥವಾ ಸ್ಟಾರ್ಟ್ ಅಪ್ ಕಂಪನಿಯ ಮಾಲೀಕ ಅಥವಾ ಬೀದಿ ವ್ಯಾಪಾರಿ.  ನಿಮಗೆ ಇಲ್ಲಿ ಒಂದಲ್ಲ ಒಂದು ಬುದ್ಧಿವಂತಿಕೆಯ ತುಂಡು ಸಿಕ್ಕೇ ಸಿಗಲಿದೆ ಎನ್ನುವದು ನಮ್ಮ ನಂಬಿಕೆ.

ಮುಖ್ಯ ವಿಭಾಗಗಳು

  • ವ್ಯಾಪಾರಿ ತಂತ್ರ
  • ಮ್ಯಾನೆಜ್ ಮೆಂಟ್
  • ನಾಯಕತ್ವ
  • ಉದ್ಯಮಶೀಲತೆ
  • ಮಾರ್ಕೆಟಿಂಗ್ ಮತ್ತು ಮಾರಾಟ
  • ಹಣಕಾಸು
  • ಅಕೌಂಟಿಂಗ್
  • ಕಾರ್ಯಾಚರಣೆ (ಆಪರೇಶನ್ಸ್)
  • ಪೂರೈಕೆ
  • ಮಾನವ ಶಕ್ತಿ
  • ತಂತ್ರಜ್ಞಾನ
  • ಹೊಸತನ
  • ಇಕೊನಾಮಿಕ್ ಟ್ರೆಂಡ್
  • ಸಾಮಾಜಿಕ ಜವಾಬ್ದಾರಿ
ಪ್ರತಿ ಪುಟದಲ್ಲಿ ವ್ಯಾಪಾರ ಮಾಡಿ ಲಾಭ ಮಾಡಲು ಅನುಕೂಲ ಆಗುವಂತಹ ವಿಷಯ, ಕನ್ಸೆಪ್ಟ್, ಸುದ್ಧಿ ನಿಮ್ಮ ಮುಂದಿಡಲಿದೆ.

ನಿಮ್ಮ ಸಲಹೆಗಳಿಗೆ ಯಾವಾಗಲೂ ಸ್ವಾಗತ.

ನೆನಪಿಡಿ ವ್ಯಾಪಾರಿ ಮನ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.

ಇಂತಿ ನಿಮ್ಮ

--ವ್ಯಾಪಾರಿ ಮನ

ವಿ,ಸೂ: ಈ ಪರಿಚಯದಲ್ಲಿರುವ ಎಲ್ಲ ಚಿತ್ರಗಳನ್ನು ಕೃತಕ ಬುದ್ಧಿವಂತಿಕೆ ಬಳಸಿ ರಚನೆ ಮಾಡಲಾಗಿದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ